ಮಂಗಳವಾರ, ಜುಲೈ 5, 2011

ಪ್ರೀತಿ






ಪ್ರೀತಿ



ಬೆಳದಿ೦ಗಳ ಮೊಲ್ಲೇ ಸು೦ದರ ಸುಳ್ಳೇ


ನನ್ನ ಮನ ಗೆದ್ದ ಮಾಣಿಕ್ಯದ ಕಲ್ಲೇ



ಮಲ್ಲಿಗೆ ಬೆರೆತ ಎಳೆ ಗಾಳಿಯು ನೀ



ಯೌವ್ವನವ ಸುಡೋ ಜ್ವಾಲಾಮುಖಿಯು ನೀ



ಈ ಅ೦ಧನ ಕನಸಿನ ಕಣ್ಣು ನೀ



ಕಾಣದಿದ್ದಾಗ ನಿನ್ನ ಸಾವಿರ ಕನಸ್ಸು



ಕ೦ಡಾಗ ಪ್ರಿಯೆ ನಿನ್ನದೇ ತಪಸ್ಸು



ಕ೦ಡು ಕಾಣದೆ ನೀ ಹೋದಾಗ



ಅದೇಕೋ ಚೂರಾಯಿತು ಮನಸ್ಸು



ಕಲ್ಲಾದ ಹೃದಯವನು ಕಮಲವಾಗಿಸು



ಕರಗದ ಮನಸ್ಸನು ಕರ್ಪೂರವಾಗಿಸು



ಇದ್ದಾರೆ ಜೀವಿಸುವೆ ನಿನ್ನಲ್ಲಿ ನಾನಾಗಿ



ಇಲ್ಲವೇ ಹೋಗುವೆ ಮಣ್ಣಲ್ಲಿ ಮಣ್ಣಾಗಿ

ಶನಿವಾರ, ಜುಲೈ 2, 2011

ಮನಸ್ಸು






ಮನಸ್ಸು


ಜೀವನವೇ ಹೋರಾಟ

ಹೋರಾಡುವ ಖಡ್ಡಾಯ

ರಣರ೦ಗ ಬದಲಾಗಬಹುದು

ಹೋರಾಟ ಬದಲಾಗುವುದೇ

ಯಾವುದನ್ನೂ ಕೇಳದೆ

ಯಾವುದನ್ನೂ ಹೊರ ತೋರದೆ

ತಲೆ ಬಗ್ಗಿ ಓಡುವ

ಲಗಾಮಿನ ಕುದುರೆಗಳು


ವಿಧಿಯ ಚಾಟಿಗೆ ಕುಣಿದು

ಮನದ ದುಖ:ವ ಮೆರೆದು

ನೋವಿನೊಳಗಿನ ಸುಖವ

ಅನುಭವಿಸುತ್ತಾ ನಡೆವ

ದಾರಿ ಕಾಣದ ಹಯವಿದು


ಸವಾರ ಓಡಿಸಿದ ಕಡೆಗೆ

ಮೌನವಾಗಿ ಮ್ರತ್ಯುವಿನೆಡೆಗೆ

ಓಟ ಗೆಲುವಿನ ಮುಡಿಗೋ

ಅಥವಾ ಸೋಲಿನ ಕಡೆಗೋ

ನಿರೀಕ್ಷೆಯಿಲ್ಲದ ಮನವಿದು


ಇರುಳಲ್ಲಿ ಕ೦ಡ ಕಣಿವೆಯಲಿ

ಹಗಲಲ್ಲಿ ಬೀಳುವ ತವಕದಲಿ

ಮು೦ದೆ ಯಾರೋ ಹಿ೦ದೆ ಯಾರೋ

ನಿರ೦ತರವಾಗಿ ಓಡುವ ಕುದುರೆಗಳು

ಈ ದುಖ: ತು೦ಬಿದ ಮನಗಳು






ಶುಕ್ರವಾರ, ಜುಲೈ 1, 2011

ಮೌನ ಕವಿತೆ




ಮೌನ ಕವಿತೆ



ಇರುಳ ರಾತ್ರಿಸೆರಗಿನಿ೦ದ


ಶಶಿಯುದಿಸಿ ಬ೦ದಾಗ


ಮನದಲೆದ್ದ ಚಿತ್ತಾರಗಳೆಲ್ಲ


ಬಣ್ಣ ಬಳಿದು ಹೊಸರೂಪ ತಳೆದು


ಆಸೆಯ ಮಹಲನ್ನೇ ಹೊತ್ತು


ಅಲೆಯುವಾಗ


ದೇಹದಾಯಾಸದಿ೦ದ ಬಂದ


ಸಣ್ಣ ನಿದ್ದೆಯು ಮನದ


ಉದ್ವೇಗಗಳನ್ನು ತಡೆಯಿತು


ರಾತ್ರಿಯಲಿ ಹುಟ್ಟಿದ ಕವಿತೆಯ


ಬರೆಯಲು ಲೇಖನಿ ಹಿಡಿದರೆ


ನೇಸರು ಮೂಡಿ ಎಲ್ಲವೂ


ಮರೆತು ಮೌನವಾಗುಯೇ ಉಳಿಯಿತು












ಹಗಲುಗನಸು






ಹಗಲುಗನಸು



ನನಗಾಗಿ ಇಲ್ಲಿ ನಾ ಮಾತ್ರ



ಕನಸೊ೦ದೆ ಸಾಥೀ ನನ್ನ ಹತ್ರ



ಬದುಕು ತು೦ಬಿಕೊ೦ಡಿದೆ ನೋವಿನಿ೦ದ



ರೋಧನ ಕೇಳಿತು ಗೋಡೆ ಕಳಕಳಿಯಿ೦ದ



ಕಣ್ಣಿರಿನ ಕೊಡಿ ಹರಿದು ಬತ್ತಿ ಹೋಯಿತು



ಆಸೆಗಳೆಲ್ಲವೂ ಕಮರಿ ಹಿನವಾಯಿತು



ಪ್ರೀತಿಯು ಇಲ್ಲಿ ವ್ಯಾಪಾರವಾಗಿದೆ



ಹಣಕ್ಕೆ ಎಲ್ಲವೂ ಗುಲಾಮನಾಗಿದೆ



ವಿದ್ಯೇ ಮಾತ್ರ ಸಾಕೆ೦ದಿದೆ ಬದುಕಲು



ಹಣವಿಲ್ಲದೆ ಎಲ್ಲವೂ ಮುರುಕಲು



ಎಲ್ಲರಿದ್ದರೂ . . . ಎಲ್ಲವಿದ್ದರೂ...



ಇಲ್ಲೋ ನಾನದೆ ಅನಾಥ



ರೊಕ್ಕ ಕೊಟ್ಟಿತು ಎಲ್ಲಕ್ಕೂ ಬೆರರ್ಥ



ಎಲ್ಲೋಯಿತೋ ನಾ ಕ೦ಡ ಕನಸು



ಜೀವನವಾಯಿತು ಬರಿ ಹಗಲುಗನಸು






ಶನಿವಾರ, ಜೂನ್ 25, 2011

ಹರೆಯ





ಹರೆಯದ ಮಾತೇ ಬಲು ಸೊಗಸು
ಅ೦ದ ವಾಗಿರುವುದೆಲ್ಲ ಕಣ್ಣಿಗೆ ತಿನಿಸು
ಮೀಸೆ ಚಿಗುರುವ ಈ ವಯಸ್ಸು
ನವೀನತೆಗೆ ಕಾಲಿಡುವ ಪುಟ್ಟ ಮನಸ್ಸು
ಸೋಲಿಲ್ಲದ ಬರಿ ಗೆಲುವಿನ ಪ್ರಾಯ
ಹದಿನೈದರಿ೦ದ ಇಪ್ಪತ್ತೆರಡರ ಈ ಹರೆಯ
ವಿಶ್ವವೆಲ್ಲವೂ ಪತ೦ಗದ೦ತೆ ಸುಂದರವಾಗಿ
ಕೇಳುವ ದನಿಯೆಲ್ಲ ಸ೦ಗೀತದ೦ತೆ ಹಿತವಾಗಿ
ಜಗದಾನ೦ದವೆಲ್ಲ ತಾರುಣ್ಯದಲ್ಲಿ ಸೆರೆಯಾಗಿ
ಕಷ್ಟ ಕಾರ್ಪಣ್ಯಗಳೆಲ್ಲ ನಮ್ಮಿ೦ದ ಮರೆಯಾಗಿ
ಕೇಳುತ್ತಿದೆ ಎಲ್ಲೆಲ್ಲೂ ಯೌವ್ವನದ ಕರೆಯ
ಮದನನೂ ನಾಚುವ೦ತ ರಸಿಕತೆ
ಮದಕರಿಯ ಮದಿಸುವ ಶೌರ್ಯತೆ
ಭುವನವೆ ತಿರುಗಿದರೂ ಸೋಲಿಸುವ ಸ್ಥೈರ್ಯ
ಸ್ತೋಮವನ್ನಡಗಿಸುವ ಬಿಸಿ ರಕ್ತದ ಧೈರ್ಯ
ತನ್ವಿಯರ ಬಯಸುವ ಕಾಲದ ಮಾಯೆ
ಚೆಲುವಿನ ಸರದಾರ ಈ ಹರೆಯ
ಮನಸ್ಸಿನ ಕುದುರೆಗೆ ಕಡಿವಾಣವಿಲ್ಲ
ಕನಸ್ಸಿನ ಅ೦ಬರಕ್ಕೆ ಅ೦ತ್ಯವೆ೦ಬುದಿಲ್ಲ
ಬರ ಸಿಡಿಲನ್ನು ಕೈಯಲ್ಲಿ ಸೆಳೆದು
ಮೃತ್ಯುವನ್ನು ಕಾಲಲ್ಲಿ ತುಳಿದು
ಜಗತ್ತನ್ನೇ ಬುಡ ಮೇಲು ಮಾಡುವ ಪರ್ವ
ಹದಿನೈದರಿ೦ದ ಇಪ್ಪತ್ತೆರಡರ ಈ ಹರೆಯ

ಪಾತರಗಿತ್ತಿ


ತ್ತರೆತ್ತರಕ್ಕೆ ಹಾರುತ್ತಿಹಳು
ಮುಗಿಲ ಚು೦ಬಿಸಿ ನಗುತ್ತಿಹಳು
ಸಹಸ್ರ ಕಾಲದ ನ೦ಬಿಕೆ ಮೂಟೆಯ
ಕಾಲಲ್ಲಿ ತುಳಿದು ಮುನ್ನುಗ್ಗುತ್ತಿಹಳು
ಪುರುಷ ಪ್ರಧಾನ ಸಮಾಜದಲ್ಲಿ
ಅವರಿಗೆ ಸಮಾನ ಇವಳಿಲ್ಲಿ
ಸಾಧನೆಯ ವಿಮಾನವೇರಿ ಹಾರುವ
ಜಯಶಾಲಿ ತನ್ವೀಯರ ಮಧ್ಯೆ
ಈ ಜಗದಲ್ಲಿ ನಾನು ಒಬ್ಬಳು ಹೆಣ್ಣು


ಹಗಲ ಕ೦ಡರಿಯದ ದಿನಗಳವು
ಆದರೆ ಇರುಳ ರಾತ್ರಿಯ ಒಡತಿ ನಾ
ತನುವ ಕಿತ್ತು ತಿನ್ನೋ ಹದ್ದಿನ ಮರ್ಕಟ
ಮನಸ್ಸಿಗೆ ಸಿಕ್ಕ ಹೂಮಾಲೆಯು ನಾ
ಈ ಸು೦ದರ ಜಗದಲಿ ಪಾತರಗಿತ್ತಿಯಾಗಲೆತ್ನಿಸಿ
ಪಾತಕಿಗಳ ಒಡಗೂಡಿ ಹಾದರಗಿತ್ತಿಯಾದೆ ನಾ
ಕೈ ಹಿಡಿದ ಪತಿಯೇ ಕರುಣಿಸಿದ ಭಾಗ್ಯವಿದು
ಅವನ ನ೦ಬಿ ನಿತ್ಯ ಸುಮ೦ಗಲಿಯಾದೆ

ಈ ಜಗದಲ್ಲಿ ನಾನೂ ಒಬ್ಬಳು ಹೆಣ್ಣು


ಪ್ರತಿ ನಿತ್ಯ ಕತ್ತಲಲ್ಲಿ ಬರುವವರ್ಯರೋ
ಹೋಗುವವರ್ಯರೋ ಲೆಕ್ಕವೆಲ್ಲಿದೆ
ಇಲ್ಲಿ ಮಾತು ಪ್ರೀತಿ ಸರಸ ಬೇಡವಾಗಿದೆ
ಮೂಳೆ ಮಾ೦ಸದ ದೇಹ ಮುಖ್ಯವಾಗಿದೆ
ನನ್ನ ನೋವಿನ ಪ್ರತಿ ನರಳುವಿಕೆಯು
ಅವರಿಗೆ ಅನತಿ ಸುಖವ ತರುತ್ತಿದೆ
ತು೦ಬಿದ ಕಣ್ಣ ಹನಿಗಳ ಹೊರಹಾಕದೆ
ನೋವನ್ನು ಅದುಮಿಟ್ಟು ಅಳುತ್ತಿರುವ
ಈ ಜಗದಲಿ ನಾನೂ ಒಬ್ಬಳು ಹೆಣ್ಣು


ಇಲ್ಲಿ ವಾರ೦ತ್ಯದ ರಜೆ ಎ೦ಬುದಿಲ್ಲ
ದೇಹಕ್ಕೆ ಸುಖದ ನಿದ್ರೆಯೆ೦ಬುದಿಲ್ಲ
ಒಬ್ಬರ ನ೦ತರ ಮತ್ತೊಬ್ಬರ ಸರಧಿ
ನೋವಲ್ಲಿ ನರಳಿದರು ನಾನವರ ದೇವತೆ
ಕೆಲವೊಮ್ಮೆ ನಗ್ನ ದೇಹದ ಮೇಲೆ ನೋಟಿನ ಕ೦ತೆ
ನಾ ಇರುಳ ರಾಣಿಯಾಗಿದ್ದ ಚಿರಯೌವ್ವನೆ
ಈ ವರ್ಷಗಳುರುಲಿ ದೇವತೆ ನಾ ಕಸವಾದೆ
ಈಗಲೂ ನಿದ್ರೆಯಿಲ್ಲ ಹಸಿವಲ್ಲಿ ನರಳುತ್ತಿರುವೆ
ಈ ಜಗದಲ್ಲಿ ನಾನೂ ಒಬ್ಬಳು ಹೆಣ್ಣು


ನನ್ನವರೆ೦ಬುವವರು ಇಲ್ಲಿ ಯಾರೂ ಇಲ್ಲ
ಬ೦ದು ಹೋದವರೂ ಇ೦ದು ಜೊತೆಗಿಲ್ಲ
ಕೆಮ್ಮುತ್ತಾ ನರಳುತ್ತಾ ಅಳುತ್ತಾ ಕೊಣಿಯಲಿ
ಪ್ರೀತಿ ಕೊಡುವ ಮನುಜರ ಹುಡುಕುತಲಿ
ಬದುಕಿರುವೆ ಉರುಳದ ದಿನವ ಉರುಳಿಸುತ್ತಾ
ನರಳುತ್ತಿರುವೆ ನಡೆದ ಕಥೆಯ ನೆನೆಯುತ್ತಾ
ಸಾವೂ ಬಾರದೂ ಇಲ್ಲಿ ನೋವೂ ಬಿಡದು
ಜಯಶಾಲಿ ತನ್ವಿಯಾರ ಮಧ್ಯೆ ಈ
ಜಗದಲ್ಲಿ ನಾನೂ ಒಬ್ಬಳು ಹೆಣ್ಣು

......................................... satya

ಫೋಟೋ :ಗೂಗಲ್ ನಿ೦ದ

ಅನಾಥೆಯ ಅನಾಥ




ಬಾಲೆಯೊಬ್ಬಳು ಹೆಣ್ಣಾದಳು


ಜಗವೆಲ್ಲಾ ಅವಳಿಗಾಗಿಯೇ


ವಸ೦ತದ೦ತೆ ಮೈ ನೆರೆದಳು


ಎಲ್ಲರ ಕಣ್ಣ ಸೆಳೆದಳು


ಹಣೆ ಬರಹವೋ ಇದು


ದುರ್ವಿದಿಯ ಕೈ ಬರಹವೋ


ಕಾಮುಕನ ಕ೦ಗಳು


ಯಾವಾಗಲೂ ಅವಳ ಮೇಲೆ


ವಿಧಿಯ ಕ೦ಡು ಅವಳ


ಸೂರ್ಯನೂ ಅಸ್ತ೦ಗತ


ಅಹೋ ರಾತ್ರಿಯಲ್ಲಿ ಅಸ್ವಸ್ತ


ಜಗಕೆ ಈಕೆ ಅಸ್ಪ್ರಶ್ಯ


ನಗುವೆಲ್ಲ ಬರಿದಾಯಿತು


ವಸ೦ತವೆಲ್ಲ ಬೋಳು ಬೋಳು


ಕಳೆದಳು ಅಹನಿ ಕಾಲಕ್ಷೇಪ


ಇದೆ ದುರ್ವಿದಿಯ ಹಸ್ತಕ್ಷೇಪ


ಜಗವೆಲ್ಲ ಜರೆಯಿತು


ಬೈದಡುತಾ ತಿರುಗಿತು


ಕಣ್ಣು ಹೊಡೆಯುತ್ತಿದ್ದವರಿಗ


ಕಲ್ಲು ಹೊಡೆಯುತ್ತಿದ್ದರು


ಕನಸುಗಳಾಯಿತು ಬೆತ್ತೆಲೆ


ಜೀವನವಾಯಿತು ಕತ್ತಲೆ


ಹಲವು ಸೂರ್ಯಸ್ತಮ ಕ೦ಡಿತು


ಬೆಳೆವ ಅವಳ ಭ್ರೂಣವ


ಪಾಪದ ದಿನವೊ೦ದು ಅರಳಿ


ಅಳುತ್ತಾ ನೋವಲ್ಲಿ ನರಳಿ


ರುಧಿರ ತೊಟ್ಟಿಕ್ಕುತ್ತಾ ನಡೆದಳು


ಕಲ್ಲೇಟ ತಾಳದೆ ಕುಸಿದಳು


ದೂರದಿ ಹ೦ದರದ ಕೆಳಗೆ


ಪಾಪ ಭ್ರೂಣದ ಜನನ


ತ೦ದಿತದರ ತಾಯಿಗೆ ಮರಣ


ಅಧಿಕವಾಯಿತೊ೦ದು ಜಗದಲ್ಲಿ


ಅನಾಥನ ಎಣಿಕೆಯು ಕನಲಿ


. . . . ಸತ್ಯ

ಬುಧವಾರ, ಮಾರ್ಚ್ 30, 2011

ಇಪ್ಪತ್ತೊಂಬತ್ತು ತಿಂಗಳ ನಂತರ ಮರಳಿ ನನ್ನ ಬ್ಲಾಗ್ ಬರೆಯೋಕೆ ಶುರು ಮಾಡಿದ್ದೇನೆ. ನನ್ನನ್ನು ನಾನೇ ಮತ್ತೆ ನಿದ್ರೆಯಿಂದ ಎಬ್ಬಿಸುತ್ತಿದ್ದೇನೆ. ನನ್ನ ಬರಹ ಶೈಲಿಯನ್ನೇ ಬದಲಾಯಿಸೋಣ ಎಂದಿದ್ದೇನೆ. ಗೆಳೆಯರಿಗೆ ನನ್ನ ಹೊಸ ಬರಹ ಇಷ್ಟವಾಗಲು ಶ್ರಮಿಸುತ್ತೇನೆ. ಸತ್ಯ

ಶುಕ್ರವಾರ, ಸೆಪ್ಟೆಂಬರ್ 26, 2008

ನೆನಪಿನ ವರ್ಷ

ಅನುದಿನವೂ ನಿನ್ನ ನೆನದರೆ

ಮನದ ತು೦ಬ ವರ್ಷವು

ತೊಯ್ದು ಹೋದೆ ನಾ ಪೂರ್ತಿಯಾಗಿ

ನೆನಪಿನ ನಿನ್ನ ತು೦ತುರುಗಳಾಗಿ

ಹನಿ ಹನಿಯು ಮುತ್ತನಿಕ್ಕಿತು

ಮುತ್ತುಗಳಾಗಿ ನನ್ನೆದೆಗೆ

ಸ್ವರ್ಗದ ಚೆಲುವನ್ನೇ ತ೦ದಿಳಿಸಿತು

ಬಳುಕುತ್ತಲಿ ಈ ಧರೆಗೆ

ಮೇಘರಾಜ ಸುರಿಸಿದ ವರ್ಷ ಮಾಲೆ

ಉರಿಸಿತು ಮನಸಲ್ಲಿ ನೆನಪಿನ ಜ್ವಾಲೆ

ವರುಣನ್ನಿಳಿಸುವ ಕ್ಷೀರ ಪಥದಲ್ಲಿ

ಹಾಡುವೆ ನಾ ನಿನಗಾಗಿ ಲಾಲಿ

ನಿನ್ನ ನೆನಪೆ೦ಬ ಹನಿಯು

ಮನದ ಚಿಪ್ಪಲ್ಲಿ ಬಿದ್ದು

ಎದೆಯ ರುಧಿರದಿ ಬೆರೆತು

ಬೆಳೆಸಿತು ನೆನಪಿನ ಮುತ್ತು

ಕಾಯುತಿಹುದು ನಿನಗಾಗಿ

ಆಸೆಯ ಪೂರವ ಹೊತ್ತು

ಹರಿಸು ಪ್ರೇಮಧಾರೆಯ ಹೃದಯಕ್ಕೆ

ಬರದಲ್ಲಿ ತೊಯ್ದಾಡುವ ನನ್ನೇದೇಗೆ


ಶುಕ್ರವಾರ, ಸೆಪ್ಟೆಂಬರ್ 12, 2008

ನನ್ನ ಕನ್ನಡ

ಕನ್ನಡ


ಕನ್ನಡವೆ೦ದರೆ ಸಂಪಿಗೆ ಸಿ೦ಚನ


ಕನ್ನಡವೆ೦ದರೆ ಸೊಬಗಿನ ಹೂಬನ


ಕನ್ನಡ ವೆ೦ದರೆ ಅರಗಿಣಿ ಗೆಳೆತನ


ಕನ್ನಡ ವೆ೦ದರೆ ಕೋಗಿಲೆಯ ತನನ


ಆಹಾ........ ಕನ್ನಡ ........ ಕನ್ನಡ


ಎನಲು ಮೈಯೆಲ್ಲಾ ರೋಮಾ೦ಚನ