ಬುಧವಾರ, ಜೂನ್ 25, 2008

ಬದುಕಿನ ನೆಲೆ

ಕುಂಟುತ್ತಾ ಕುರುಡುತ್ತಾ ಅಳುತ್ತಾ ತೆವಳುತ್ತಾ
ದಿಗಂತದತ್ತ ಸಾಗಿದೆ ಬಣ್ಣದ ಕನಸು ಕಾಣುತ್ತಾ
ಕರ್ಪೂರವಾಗಿ ಕರಗುತ್ತಾ ಕಲ್ಪನೆಯಲ್ಲಿ ತೇಲುತ್ತಾ
ಬರಿ ನೆಲದಲ್ಲಿ ನಡೆದಿದೆ ವಿಮಾನವ ನೆನೆಯುತ್ತಾ
ಕೂಗದ ಕರೆಗಂಟೆ ಕರೆಯದ ಕರೆಯೋಲೆ
ಕಾಣುತ್ತಿದೆ ವಾಸ್ತ್ಥವತೆಯನ್ನು ಈ ಬದುಕು

ಹರ್ಷದ ಅರಮನೆಯನ್ನು ನೆನೆಯುತ್ತಾ
ಅರಗಿನ ಮನೆಯಲ್ಲಿ ಕರಗುತ್ತಾ
ಕಣ್ಣೀರ ಸುರಿಸಿದೆ ಬೈತಲೆಯ ಬಡಿಯುತ್ತಾ
ಮೃಷ್ಟಾನ್ನದ ಆಸೆಯಲಿ ತಂಗಳನ್ನವ ತಿನ್ನುತ್ತಾ
ಗದ್ದಲದ ಬೀದಿಯಲಿ ಸಂಗೀತವ ಹುಡುಕುತ್ತಾ
ಮುಲೆ ಸೇರಿದೆ ಈ ಬಣ್ಣದ ಬದುಕು

ಕಾಡುವ ಜನರ ಬೇಡುತ ನಡೆದು
ಮೌನದಿ ಶೋಕ ಗೀತೆ ಹಾಡುತ ಕುಣಿದು
ನಾಳೆಯ ಕನಸಲಿ ದಿನವನ್ನು ಕಳೆದು
ಪ್ರವಾಹದ ನದಿಯಂತೆ ಕಣ್ಣಿರು ಸುರಿದು
ಬೆರಗು ಕಣ್ಣಲ್ಲಿ ಭವಿಷ್ಯವ ನೆನೆದು
ಮತೊಂದಡದೆ ಮೌನವಾಗಿದೆ ಬದುಕು


ಇದು ನನ್ನ ಮೊದಲ ಕವಿತೆ
Please send the comments

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ