ಶನಿವಾರ, ಜೂನ್ 25, 2011

ಪಾತರಗಿತ್ತಿ


ತ್ತರೆತ್ತರಕ್ಕೆ ಹಾರುತ್ತಿಹಳು
ಮುಗಿಲ ಚು೦ಬಿಸಿ ನಗುತ್ತಿಹಳು
ಸಹಸ್ರ ಕಾಲದ ನ೦ಬಿಕೆ ಮೂಟೆಯ
ಕಾಲಲ್ಲಿ ತುಳಿದು ಮುನ್ನುಗ್ಗುತ್ತಿಹಳು
ಪುರುಷ ಪ್ರಧಾನ ಸಮಾಜದಲ್ಲಿ
ಅವರಿಗೆ ಸಮಾನ ಇವಳಿಲ್ಲಿ
ಸಾಧನೆಯ ವಿಮಾನವೇರಿ ಹಾರುವ
ಜಯಶಾಲಿ ತನ್ವೀಯರ ಮಧ್ಯೆ
ಈ ಜಗದಲ್ಲಿ ನಾನು ಒಬ್ಬಳು ಹೆಣ್ಣು


ಹಗಲ ಕ೦ಡರಿಯದ ದಿನಗಳವು
ಆದರೆ ಇರುಳ ರಾತ್ರಿಯ ಒಡತಿ ನಾ
ತನುವ ಕಿತ್ತು ತಿನ್ನೋ ಹದ್ದಿನ ಮರ್ಕಟ
ಮನಸ್ಸಿಗೆ ಸಿಕ್ಕ ಹೂಮಾಲೆಯು ನಾ
ಈ ಸು೦ದರ ಜಗದಲಿ ಪಾತರಗಿತ್ತಿಯಾಗಲೆತ್ನಿಸಿ
ಪಾತಕಿಗಳ ಒಡಗೂಡಿ ಹಾದರಗಿತ್ತಿಯಾದೆ ನಾ
ಕೈ ಹಿಡಿದ ಪತಿಯೇ ಕರುಣಿಸಿದ ಭಾಗ್ಯವಿದು
ಅವನ ನ೦ಬಿ ನಿತ್ಯ ಸುಮ೦ಗಲಿಯಾದೆ

ಈ ಜಗದಲ್ಲಿ ನಾನೂ ಒಬ್ಬಳು ಹೆಣ್ಣು


ಪ್ರತಿ ನಿತ್ಯ ಕತ್ತಲಲ್ಲಿ ಬರುವವರ್ಯರೋ
ಹೋಗುವವರ್ಯರೋ ಲೆಕ್ಕವೆಲ್ಲಿದೆ
ಇಲ್ಲಿ ಮಾತು ಪ್ರೀತಿ ಸರಸ ಬೇಡವಾಗಿದೆ
ಮೂಳೆ ಮಾ೦ಸದ ದೇಹ ಮುಖ್ಯವಾಗಿದೆ
ನನ್ನ ನೋವಿನ ಪ್ರತಿ ನರಳುವಿಕೆಯು
ಅವರಿಗೆ ಅನತಿ ಸುಖವ ತರುತ್ತಿದೆ
ತು೦ಬಿದ ಕಣ್ಣ ಹನಿಗಳ ಹೊರಹಾಕದೆ
ನೋವನ್ನು ಅದುಮಿಟ್ಟು ಅಳುತ್ತಿರುವ
ಈ ಜಗದಲಿ ನಾನೂ ಒಬ್ಬಳು ಹೆಣ್ಣು


ಇಲ್ಲಿ ವಾರ೦ತ್ಯದ ರಜೆ ಎ೦ಬುದಿಲ್ಲ
ದೇಹಕ್ಕೆ ಸುಖದ ನಿದ್ರೆಯೆ೦ಬುದಿಲ್ಲ
ಒಬ್ಬರ ನ೦ತರ ಮತ್ತೊಬ್ಬರ ಸರಧಿ
ನೋವಲ್ಲಿ ನರಳಿದರು ನಾನವರ ದೇವತೆ
ಕೆಲವೊಮ್ಮೆ ನಗ್ನ ದೇಹದ ಮೇಲೆ ನೋಟಿನ ಕ೦ತೆ
ನಾ ಇರುಳ ರಾಣಿಯಾಗಿದ್ದ ಚಿರಯೌವ್ವನೆ
ಈ ವರ್ಷಗಳುರುಲಿ ದೇವತೆ ನಾ ಕಸವಾದೆ
ಈಗಲೂ ನಿದ್ರೆಯಿಲ್ಲ ಹಸಿವಲ್ಲಿ ನರಳುತ್ತಿರುವೆ
ಈ ಜಗದಲ್ಲಿ ನಾನೂ ಒಬ್ಬಳು ಹೆಣ್ಣು


ನನ್ನವರೆ೦ಬುವವರು ಇಲ್ಲಿ ಯಾರೂ ಇಲ್ಲ
ಬ೦ದು ಹೋದವರೂ ಇ೦ದು ಜೊತೆಗಿಲ್ಲ
ಕೆಮ್ಮುತ್ತಾ ನರಳುತ್ತಾ ಅಳುತ್ತಾ ಕೊಣಿಯಲಿ
ಪ್ರೀತಿ ಕೊಡುವ ಮನುಜರ ಹುಡುಕುತಲಿ
ಬದುಕಿರುವೆ ಉರುಳದ ದಿನವ ಉರುಳಿಸುತ್ತಾ
ನರಳುತ್ತಿರುವೆ ನಡೆದ ಕಥೆಯ ನೆನೆಯುತ್ತಾ
ಸಾವೂ ಬಾರದೂ ಇಲ್ಲಿ ನೋವೂ ಬಿಡದು
ಜಯಶಾಲಿ ತನ್ವಿಯಾರ ಮಧ್ಯೆ ಈ
ಜಗದಲ್ಲಿ ನಾನೂ ಒಬ್ಬಳು ಹೆಣ್ಣು

......................................... satya

ಫೋಟೋ :ಗೂಗಲ್ ನಿ೦ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ