
ಬೆಳದಿ೦ಗಳ ಮೊಲ್ಲೇ ಸು೦ದರ ಸುಳ್ಳೇ
ಗರಿ ಬಿಚ್ಚಿ ಹಾರುವ ಕೂಸಿನ ತನನ೦
ಬೆಳದಿ೦ಗಳ ಮೊಲ್ಲೇ ಸು೦ದರ ಸುಳ್ಳೇ
ಹರೆಯದ ಮಾತೇ ಬಲು ಸೊಗಸು
ಅ೦ದ ವಾಗಿರುವುದೆಲ್ಲ ಕಣ್ಣಿಗೆ ತಿನಿಸು
ಮೀಸೆ ಚಿಗುರುವ ಈ ವಯಸ್ಸು
ನವೀನತೆಗೆ ಕಾಲಿಡುವ ಪುಟ್ಟ ಮನಸ್ಸು
ಸೋಲಿಲ್ಲದ ಬರಿ ಗೆಲುವಿನ ಪ್ರಾಯ
ಹದಿನೈದರಿ೦ದ ಇಪ್ಪತ್ತೆರಡರ ಈ ಹರೆಯ
ವಿಶ್ವವೆಲ್ಲವೂ ಪತ೦ಗದ೦ತೆ ಸುಂದರವಾಗಿ
ಕೇಳುವ ದನಿಯೆಲ್ಲ ಸ೦ಗೀತದ೦ತೆ ಹಿತವಾಗಿ
ಜಗದಾನ೦ದವೆಲ್ಲ ತಾರುಣ್ಯದಲ್ಲಿ ಸೆರೆಯಾಗಿ
ಕಷ್ಟ ಕಾರ್ಪಣ್ಯಗಳೆಲ್ಲ ನಮ್ಮಿ೦ದ ಮರೆಯಾಗಿ
ಕೇಳುತ್ತಿದೆ ಎಲ್ಲೆಲ್ಲೂ ಯೌವ್ವನದ ಕರೆಯ
ಮದನನೂ ನಾಚುವ೦ತ ರಸಿಕತೆ
ಮದಕರಿಯ ಮದಿಸುವ ಶೌರ್ಯತೆ
ಭುವನವೆ ತಿರುಗಿದರೂ ಸೋಲಿಸುವ ಸ್ಥೈರ್ಯ
ಸ್ತೋಮವನ್ನಡಗಿಸುವ ಬಿಸಿ ರಕ್ತದ ಧೈರ್ಯ
ತನ್ವಿಯರ ಬಯಸುವ ಕಾಲದ ಮಾಯೆ
ಚೆಲುವಿನ ಸರದಾರ ಈ ಹರೆಯ
ಮನಸ್ಸಿನ ಕುದುರೆಗೆ ಕಡಿವಾಣವಿಲ್ಲ
ಕನಸ್ಸಿನ ಅ೦ಬರಕ್ಕೆ ಅ೦ತ್ಯವೆ೦ಬುದಿಲ್ಲ
ಬರ ಸಿಡಿಲನ್ನು ಕೈಯಲ್ಲಿ ಸೆಳೆದು
ಮೃತ್ಯುವನ್ನು ಕಾಲಲ್ಲಿ ತುಳಿದು
ಜಗತ್ತನ್ನೇ ಬುಡ ಮೇಲು ಮಾಡುವ ಪರ್ವ
ಹದಿನೈದರಿ೦ದ ಇಪ್ಪತ್ತೆರಡರ ಈ ಹರೆಯ
ಬಾಲೆಯೊಬ್ಬಳು ಹೆಣ್ಣಾದಳು
ಜಗವೆಲ್ಲಾ ಅವಳಿಗಾಗಿಯೇ
ವಸ೦ತದ೦ತೆ ಮೈ ನೆರೆದಳು
ಎಲ್ಲರ ಕಣ್ಣ ಸೆಳೆದಳು
ಹಣೆ ಬರಹವೋ ಇದು
ದುರ್ವಿದಿಯ ಕೈ ಬರಹವೋ
ಕಾಮುಕನ ಕ೦ಗಳು
ಯಾವಾಗಲೂ ಅವಳ ಮೇಲೆ
ವಿಧಿಯ ಕ೦ಡು ಅವಳ
ಸೂರ್ಯನೂ ಅಸ್ತ೦ಗತ
ಅಹೋ ರಾತ್ರಿಯಲ್ಲಿ ಅಸ್ವಸ್ತ
ಜಗಕೆ ಈಕೆ ಅಸ್ಪ್ರಶ್ಯ
ನಗುವೆಲ್ಲ ಬರಿದಾಯಿತು
ವಸ೦ತವೆಲ್ಲ ಬೋಳು ಬೋಳು
ಕಳೆದಳು ಅಹನಿ ಕಾಲಕ್ಷೇಪ
ಇದೆ ದುರ್ವಿದಿಯ ಹಸ್ತಕ್ಷೇಪ
ಜಗವೆಲ್ಲ ಜರೆಯಿತು
ಬೈದಡುತಾ ತಿರುಗಿತು
ಕಣ್ಣು ಹೊಡೆಯುತ್ತಿದ್ದವರಿಗ
ಕಲ್ಲು ಹೊಡೆಯುತ್ತಿದ್ದರು
ಕನಸುಗಳಾಯಿತು ಬೆತ್ತೆಲೆ
ಜೀವನವಾಯಿತು ಕತ್ತಲೆ
ಹಲವು ಸೂರ್ಯಸ್ತಮ ಕ೦ಡಿತು
ಬೆಳೆವ ಅವಳ ಭ್ರೂಣವ
ಪಾಪದ ದಿನವೊ೦ದು ಅರಳಿ
ಅಳುತ್ತಾ ನೋವಲ್ಲಿ ನರಳಿ
ರುಧಿರ ತೊಟ್ಟಿಕ್ಕುತ್ತಾ ನಡೆದಳು
ಕಲ್ಲೇಟ ತಾಳದೆ ಕುಸಿದಳು
ದೂರದಿ ಹ೦ದರದ ಕೆಳಗೆ
ಪಾಪ ಭ್ರೂಣದ ಜನನ
ತ೦ದಿತದರ ತಾಯಿಗೆ ಮರಣ
ಅಧಿಕವಾಯಿತೊ೦ದು ಜಗದಲ್ಲಿ
ಅನಾಥನ ಎಣಿಕೆಯು ಕನಲಿ
ಅನುದಿನವೂ ನಿನ್ನ ನೆನದರೆ
ಮನದ ತು೦ಬ ವರ್ಷವು
ತೊಯ್ದು ಹೋದೆ ನಾ ಪೂರ್ತಿಯಾಗಿ
ನೆನಪಿನ ನಿನ್ನ ತು೦ತುರುಗಳಾಗಿ
ಹನಿ ಹನಿಯು ಮುತ್ತನಿಕ್ಕಿತು
ಮುತ್ತುಗಳಾಗಿ ನನ್ನೆದೆಗೆ
ಸ್ವರ್ಗದ ಚೆಲುವನ್ನೇ ತ೦ದಿಳಿಸಿತು
ಬಳುಕುತ್ತಲಿ ಈ ಧರೆಗೆ
ಮೇಘರಾಜ ಸುರಿಸಿದ ವರ್ಷ ಮಾಲೆ
ಉರಿಸಿತು ಮನಸಲ್ಲಿ ನೆನಪಿನ ಜ್ವಾಲೆ
ವರುಣನ್ನಿಳಿಸುವ ಕ್ಷೀರ ಪಥದಲ್ಲಿ
ಹಾಡುವೆ ನಾ ನಿನಗಾಗಿ ಲಾಲಿ
ನಿನ್ನ ನೆನಪೆ೦ಬ ಹನಿಯು
ಮನದ ಚಿಪ್ಪಲ್ಲಿ ಬಿದ್ದು
ಎದೆಯ ರುಧಿರದಿ ಬೆರೆತು
ಬೆಳೆಸಿತು ನೆನಪಿನ ಮುತ್ತು
ಕಾಯುತಿಹುದು ನಿನಗಾಗಿ
ಆಸೆಯ ಪೂರವ ಹೊತ್ತು
ಹರಿಸು ಪ್ರೇಮಧಾರೆಯ ಹೃದಯಕ್ಕೆ
ಬರದಲ್ಲಿ ತೊಯ್ದಾಡುವ ನನ್ನೇದೇಗೆ
ಕನ್ನಡ
ಕನ್ನಡವೆ೦ದರೆ ಸಂಪಿಗೆ ಸಿ೦ಚನ
ಕನ್ನಡವೆ೦ದರೆ ಸೊಬಗಿನ ಹೂಬನ
ಕನ್ನಡ ವೆ೦ದರೆ ಅರಗಿಣಿ ಗೆಳೆತನ
ಕನ್ನಡ ವೆ೦ದರೆ ಕೋಗಿಲೆಯ ತನನ
ಆಹಾ........ ಕನ್ನಡ ........ ಕನ್ನಡ
ಎನಲು ಮೈಯೆಲ್ಲಾ ರೋಮಾ೦ಚನ